ಫಿಲಡೆಲ್ಫಿಯ 2

	ಮಿಸಿಸಿಪ್ಪಿ ರಾಜ್ಯದ ನಸೂಬ ಕೌಂಟಿಯ ಆಡಳಿತ ಕೇಂದ್ರ ಪಟ್ಟಣ. ಈ ಹೆಸರಿನ ಪಟ್ಟಣಗಳು ಪ್ರಾಚೀನ ತುರ್ಕಿಯಲ್ಲಿ ಎರಡು, ಜಾರ್ಡನಿನಲ್ಲಿ ಒಂದು ಮತ್ತು ಈಜಿಪ್ಟಿನಲ್ಲಿ ಒಂದು ಇದ್ದುವು. ಪಶ್ಚಿಮ ತುರ್ಕಿಯ ಆಲ್ ಇ ಸೆಹಿರ್ ನದಿ ದಡದಲ್ಲಿ ಕ್ರಿ..ಪೂ.ಸು. 150ರಲ್ಲಿ ಪೆರ್ಗಾಮ್ ರಾಜ್ಯದ ದೊರೆಯಾಗಿದ್ದ ಎರಡನೆಯ ಅಟಾಲಸ್ (ಫಿಲಡೆಲ್ಫಸ್) ಕಟ್ಟಿದ ನಗರಕ್ಕೆ ಫಿಲಡೆಲ್ಫಿಯ ಎಂಬ ಹೆಸರಿದ್ದು ಈಗ ಅದರ ಹೆಸರು ಆಲ್ ಇ ಸೆಹರ್ ಎಂದಾಗಿದೆ. ಜಾರ್ಡನಿನ ಉತ್ತರದಲ್ಲಿದ್ದ ನಗರವನ್ನು ಎರಡನೆಯ ಟಾಲೆಮಿ ಫಿಲಡೆಲ್ಪಸ್ (ಕ್ರಿ.ಪೂ. 285-246) ಅಭಿವೃದ್ಧಿಪಡಿಸಿದ. ಅವನ ಹೆಸರಿನಿಂದಲೇ ನಗರವನ್ನು ಫಿಲಡೆಲ್ಫಿಯ ಎಂದು ಕರೆಯಲಾಯಿತು. ಮುಂದೆ ನಗರ ಬಹಳ ಅಭಿವೃದ್ಧಿಯಾಗಿ ಇಂದಿನ ಜಾರ್ಡನ್ ರಾಜ್ಯದ ರಾಜಧಾನಿ ಅಮ್ಮಾನ್ ಎಂದು ಪ್ರಸಿದ್ಧವಾಗಿದೆ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ